Friday 28 October 2011

ಅಂಗೈಯಗಲ ಗೋರಂಟಿ

   

   ನೋಡನೋಡುತ್ತ ಅಷ್ಟೆತ್ತರ ಬೆಳೆದು ತೊನೆಯುವ ಗೋರಂಟಿ ಗಿಡ. ಈಷ್ಟುದ್ದ ಕೈಚಾಚಿಯೇ ಪಡೆಯಬೇಕು ಒಂದೊಂದೆ ಎಲೆಗೆಳನ್ನ. ಅದರ ಧಿಮಾಕು ನಮಗೆ ತಿಳಿಯೋದಾದ್ರೂ ಹೇಗೆ ಮತ್ತೆ?
ಎಲ್ಲಿ ನೋವಾಗುತ್ತೋ ಅಂತ ಒಂದೊಂದೆ ಎಲೆಗಳನ್ನ ನಿಧಾನ ಬಿಡಿಸಿಕೊಳ್ಳಬೇಕು ಅದರ ತೊಟ್ಟಿಂದ. ಬೊಗಸೆ ತಂಬ ಪುಟ್ಟ ಪುಟ್ಟ, ಚೂಪು ಮೂತಿಯ, ಚೆಂದದ ಎಲೆಗಳಿಗೊಮ್ಮೆ ಕಣ್ಣು ತಾಗಿಸಿ, ಅಪರೂಪಕ್ಕೊಮ್ಮೆ ಅಜ್ಜಿಯನ್ನು ನೆನಪಿಸುವ ಅರೆಯುವ ಕಲ್ಲಮೇಲೆ ಇವುಗಳನ್ನಿಟ್ಟು, ಗರಾ ಗರಾ ರಾಗ ತೆಗೆಸಬೇಕು.. ಅಜ್ಜಿಗೆ ತನ್ನ ಯೌವನದ ಗೋರಂಟಿ ಕೈ ನೆನಪಾದಾಗ ಯಾವುದೋ ಖುಶಿಯಿಂದ ಗುನುಗಿಕೊಂಡ ಹಾಗೆ.. ಆಗಲೇ ಘಮ್ಮ್...ಅನ್ನೊ ಗಾಢ ಹಸಿರು ಬಟ್ಟಲು ಸೇರೋದು. ಮಾಟಗಾತಿ ಥರ ಈ ಹಸಿರಿನ ಮೇಲೆ ನಿಧಾನಕ್ಕೆ ಮಳ್ಳ ಮಣ್ಣಿನ ಬಣ್ಣವೊಂದು ಹಾಸಿಕೊಳ್ಳುತ್ತೆ...ನಾವೂ ಕೂಡ ಇದನ್ನು ಕಂಡೇ ಇರದ ಹಾಗಿರಬೇಕು!

    ಇನ್ನು, ಬಸುರಿ ಥರ ನಾಚಿಕೊಂಡು, ಒಳಗೊಳಗೆ ಸಂಭ್ರಮಪಡುವ ಅಂಗೈಯನ್ನೊಮ್ಮೆ ಕಣ್ಣು ಕಿರಿದು ಮಾಡಿ, ಸ್ವಲ್ಪ ಹುಬ್ಬು ಗಂಟಿಕ್ಕಿ ದಿಟ್ಟಿಸಬೇಕು - ಉಕ್ಕಿಬರುವ ಉತ್ಸಾಹ ಹೊರಗೆ ಸುರಿದುಹೋಗದಂತೆ ತೆಳುವಾದ ನಗುವಿನ ಮುಚ್ಚಳ ಹಾಕಿ ಒಮ್ಮೆ ಅಂಗೈ ನೋಡಬೇಕು. ಯಾವ ಚಿತ್ರ, ಎಷ್ಟುದ್ದ ಗೆರೆ, ಎಂಥ ಚುಕ್ಕಿ, ಎಲ್ಲಿ, ಎಷ್ಟು, ಹೇಗೆ ಅಂತ ಮನಸಲ್ಲೇ ನಕಾಶೆ ಮಾಡಿ,..ಚಿತ್ರ ಹಚ್ಚಬೇಕು.  ಗೋರಂಟಿ ಅಂಟಿದ ಕೈ ಒಮ್ಮೆಗೆ ತಣ್ಣಗಾಗಿ, ನಿಧಾನ ಬಿಸಿಯಾಗುತ್ತ ಬಣ್ಣ ಬಸಿದುಕೊಳ್ಳುವ ಖುಶಿಗೆ ತಲೆದೂಗಬೇಕು. ಇನ್ನು ಈ ಚಿತ್ರದ ಕೈಗಿಂತ ಇಡೀ ಜಗತ್ತಲ್ಲಿ ಮತ್ತೇನೂ  ಮುಖ್ಯವಲ್ಲವೇ ಅಲ್ಲ ಅನ್ನೋಹಾಗೆ ಜೋಪಾನಮಾಡಲೇಬೇಕು. ಮದರಂಗಿಯ ಮದವೆಲ್ಲ ಅಂಗೈಗೆ ಇಳಿದು, ಉಳಿದು ನಿಲ್ಲುವ ತನಕ ಮೈಯೆಲ್ಲ ಕಣ್ಣಾಗಿರಲೇಬೇಕು. 


    ಆಹ್! ಬಂದೇ ಬರಬೇಕು ಆ ಘಳಿಗೆ ಕೂಡ! ಒಣ ಚಿತ್ರ ತಾನಾಗಿ ಉಸ್ಸಪ್ಪ,.. ಸಾಕು ಅನ್ನುವ ಕಾಲ, ಕೈಯಿಂದ ಬಿಡಿಸಿ ತೊಳೆದುಹೋಗುವ ಕಾಲ. ಹಾ,..ಈಗ ಇದು ಶತಮಾನಗಳಿಂದ ಇಲ್ಲೇ ಅಡಗಿ ಕುಳಿತು, ಈಗಷ್ಟೆ ಮೈಮುರಿದು ಎದ್ದುಕುಳಿತಂಥ ಬಣ್ಣ! ಅಂಟಿದ್ದಲ್ಲ,..ಇಲ್ಲೇ, ಈಗಲೇ ಹುಟ್ಟಿದ್ದು ಅನ್ನುವ ಹಾಗೆ! ಮುಖದ ಇಷ್ಟಗಲ ನಗುವಿಗೂ ಗೋರಂಟಿ ಕೆಂಪು! ಜಗತ್ತಿನ ಕಾವ್ಯ, ಸಂಗೀತ, ಚಿತ್ರ, ಕಥೆಗಳೆಲ್ಲ ಆ ಕ್ಷಣವೇ ಜೀವಂತ!!

    ಈ ಘಮ್ಮನೆ ಗೋರಂಟಿ ಕೈಯಗಲದಲ್ಲಿ ದೃಶ್ಯಕಲೆಯನ್ನು ಕುರಿತು, ಮುಖ್ಯವಾಗಿ ಚಿತ್ರಕಲೆ ಮತ್ತು ದೃಶ್ಯಗ್ರಹಿಕೆಯ ಪರಿಭಾಷೆಯನ್ನು ಕುರಿತು ನುಡಿ-ನೋಟಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ, ಚರ್ಚಿಸುವ, ಸಂವಾದಿಸುವ ಆಸೆ ನನ್ನದು. ಬನ್ನಿ, ಅಂಗೈಯಗಲದ ಗೋರಂಟಿಯ ಬಣ್ಣ, ಬೆರಗನ್ನು ಕಾಣಿ. ನಿಮ್ಮ ಟೀಕೆ, ವಿಮರ್ಶೆ, ಸಲಹೆ, ಸಹನೆಯಿಂದ ಈ ಅಂಗೈಮೇಲೆ ಹೊಸ ಚಿತ್ರಗಳ ಸಾಧ್ಯತೆಯನ್ನು ಆಗುಮಾಡಿ.



 

14 comments:

  1. chin i am so happy for this new venture and exclusive blog for art writing and other writings about visual culture.
    so on this new light year and on occasion of our state formation day i congratulate you (and will be with u soon to wish and congratulate you in person ).
    so proud of u and your work kanda and for this new blog.
    wonder full metaphor of Goranti should attract and be a platform for art writing,even though its a small gesture and as symbolic as your palm but the fragrance of goranti and nostalgia or of its memory in every one will be wide spread soon, as for your concern and all our wishes of art community and beyond .

    ReplyDelete
  2. Very beautiful prose, Charita. It is like a refreshing breeze.

    Raghu Dharmendra
    Ramsons Kala Pratishtana

    ReplyDelete
  3. Suresh,
    thanks for your loving words. I hope to receive more encouraging readers further.

    ReplyDelete
  4. ಓಹ್! ಚೆನ್ನಾಗಿದೆ ನಿಮ್ಮ ಭಾಷೆ, ಲಯ, ಚಿತ್ರಕಲೆ ಮಾತ್ರ ನಿಮಗೆ ಒಲಿದಿಲ್ಲ... ಗೋರಂಟಿಯ ಬಣ್ಣ ಹೀಗೆ ಬಿಡುತ್ತಿರಲಿ.. ಬರೆಯುತ್ತಿರಿ...

    ReplyDelete
  5. @ chandramukhi,

    :-) thank you

    ReplyDelete
  6. to be honest for me its too abstract am not grown to level to understand it

    ReplyDelete
  7. ದಿನೇಶ್ ಕುಕ್ಕುಜಡ್ಕ30 October 2011 at 22:54

    ಕುತೂಹಲಿಯಾಗಿದ್ದೇನೆ. ಆಲ್ ದಿ ಬೆಸ್ಟ್...

    ReplyDelete
  8. ಭಾಷೆ, ಭಾವ, ಬಣ್ಣ ಎಲ್ಲವೂ ಸುಂದರ. ಗೋರಂಟಿಯ ಬಣ್ಣಗಳು ನನ್ನ ಕೈಗೂ, ಮನಸ್ಸಿಗೂ ಅಂಟಿಕೊಳ್ಳುತ್ತಿದೆ.
    ನನ್ನ ಬ್ಲಾಗಿನಲ್ಲಿ ಇದರ ಲಿಂಕ್ ಹಾಕಿಕೊಳ್ಳುತ್ತೇನೆ

    ReplyDelete
  9. buddha, ದಿನೇಶ್, ಉಷಾ - ಎಲ್ಲರಿಗೂ ಥ್ಯಾಂಕ್ಸ್.

    ReplyDelete
  10. nicely narrated one though there have already been a number of aritcles on the same subject, both in prose and verse. this one more or less translates into a do-it-yourself guide that explains how to prepare, apply, and enjoy henna onto some delicate hands; or into a writing that makes a mockery of the city-born-and-bred mademoiselles who are completely deprived of the little joys that when added together, make up something called “Life!”

    but i couldn’t control guffawing when i read the line “ಮದರಂಗಿಯ ಮದವೆಲ್ಲ ಅಂಗೈಗೆ ಇಳಿದು, ಉಳಿದು ನಿಲ್ಲುವ ತನಕ ಮೈಯೆಲ್ಲ ಕಣ್ಣಾಗಿರಲೇಬೇಕು.” “ಮದರಂಗಿಯ ಮದ??” – hello, excuse me! what does this exactly mean? ROFLOL! well, i believe its been used to spiece up the writing. or may be the writer got carried away with her own prowess of using rhymes! lol. if you really wanted to use rhymes, then i’m wondering why didn’t you think of something like “ಮದರಂಗಿಯ ಮದವೆಲ್ಲ ಮದವೇರಿದ ಮದ್ದಾನೆಯ ಮದವಡಗಿಸಿದ ಮದಕರಿನಾಯಕನ ಮದುವೆಯ ಮುನ್ನಾದಿನದಾತನ ಮತ್ತೇರಿದ ಮೈಯ್ಯಂತೆ ಮಿರಮಿರನೆ ಮಿಂಚುತಿರ್ಪುದು…” sounds better, doesn’t it? lolz

    …still laughing,
    -Rankusa

    oh by the way, first read this article on avadhimag.com; just ctrl c + ctrl v'ing my comments posted over there :)

    overall a gud read! kudos!

    ReplyDelete
  11. Hi Charitha,

    Thanks for calling my comments a ‘lively’ one (for most of the authors/people will certainly ‘not’ find them as lively), plus publicizing it without making any amendments (for most of my comments will either get blocked, or get ‘refined’). You made my day! And thanks on behalf of all the commenting fellas for sincerely replying to each and everyone’s comments---a basic common+civic sense that many of our self-proclaimed ‘writers/authors’ lack…

    Checked your complete profile just now. Well, I’m happy to know that I’m arguing with a much ‘learned’ one, whereas you’re not! (I don’t know whether this will make you happy or not :)

    Coming back to madarangi--- ಐತೆ, 'ಮದ'ರಂಗಿಗೆ/ಯಲ್ಲಿ ಖಂಡಿತಾ ‘ಮದ’ ಐತೆ...ಆದ್ರೆ ಅದ್ರ ಹೆಸ್ರಿನ ಒಂದು ಭಾಗ್ವಾಗಿ ಮಾತ್ರ ಅಂತ ನನ್ನಸ್ಕೆ! ನಂಗ್ತಿಳ್ದಂಗೆ 'ಮದ' ಅಂದ್ರೆ 'ಸೊಕ್ಕು,' 'ಗರ್ವ,' 'ಅಮ್ಲು.' ಮದ್ರಂಗಿನ "ಮದ+ರಂಗಿ" ಅಂತ ಬಿಡ್ಸಿ ಅರ್ಥೈಸೋಕಾಗಲ್ಲ (ran+kusa, or rank+usa ಇದ್ದಂಗೆ). ಅದು 'ಸಂಧಿ' ಅಂತ ಅಂತ್ಲೂ ಅನ್ಸ್ತಿಲ್ಲ, ಹಾಗೂ, ನಾನೆ೦ಟ್ನೇ ಕ್ಲಾಸ್ ಕನ್ನಡ ಪಾಠನ ಎಂಟ್ನೆ ಕ್ಲಾಸ್ನಲ್ಲೇ ಮರ್ತಿರೋದ್ರಿಂದ ಅದ್ರ associated ಸಮಾಸನೂ ಗೊತ್ತಿಲ್ಲ. ಸರಿ, going by the logic 'ಮದ' ಇರೋದ್ರಿ೦ದ್ಲೇ 'ಮದರಂಗಿ' ಅಂಥ ಆಯ್ತು ಅಂತಿಟ್ಕೊಂಡ್ರೆ ನಮ್ ಗ್ರಾಮೀಣ ಪ್ರಾಂತಗಳ highly popular ಹೆಸ್ರುಗಳಾದ 'ಹುಚ್ಚಪ್ಪ,' 'ಕರಡಯ್ಯ,' ‘'ಕಾಮಾಕ್ಷಿ,' ಅಥ್ವ ಸ್ವಲ್ಪ polished examples ಆದ 'ಸೀತಾಫಲ,' 'ರವಿಚಂದ್ರ,'ಶನಿಮಹದೇವಪ್ಪ' ಮುಂತಾದ ಹೆಸ್ರುಗಳ origin ಬಗ್ಗೆ ನೆನ್ಸ್ಕೊಂಡ್ರೇನೇ ಬಲೇ ಮಜಾ ಸಿಗುತ್ತೆ ಅಲ್ವಾ??! :) therefore I believe the assumed logic gets defeated here. What do you think? :) Hence the interesting comparison of 'ಮದ’ and 'ಮದರಂಗಿ' were highlighted, without any prejudice of seeking perfection out of any article.

    And now is my curious name. The answer to your question lies in another question of yours i.e. “…why people always want to get struck with some expectation of finding only guidelines or info..?!” Splitting the name into Ran+kusa or Rank+usa based on the same logic that you’d applied to decipher the word madarangi = mada+rangi is unfortunately, void here. The name ರಂಕುಸ is just the ರಂಕುಸ as in:

    ಆ "ರಂಕುಸ"ಮಿಟ್ಟೊಡಮ್ ನೆನೆವುದೆನ್ನ ಮನಂ ಬನವಾಸಿ ದೇಶಮಂ

    ….signifying my punning way of talking; and at the same time, reminding me of one of the greatest, and one of my all time favorite poets! :)

    P.S. I’m not from Banavasi, and ಪಂಪ್ನಪ್ನಾಣೆಗೂ I don’t know Halegannada well. But at times, you end up liking some things, some places, or some people without even knowing the reason, right? People give different names to that kinda liking depending on their age, gender, and many other factors. Mine is just another such case … :)

    Let me stop blabbering before it becomes bigger than your blog writings!

    Enjoy your Sun+day! ;)

    Regs,
    -R

    ReplyDelete
  12. Dear Rankusa,..

    first of all I am glad to receive your 'lively' comment! thanks for that.:-)but wondering why people always want to get struck with some expectation of finding only guidelines or info through all articles?!

    'ಮದರಂಗಿಯ ಮದ' ಅಂದಿದ್ದು ಪ್ರಾಸಕ್ಕಾಗಿ ಅಲ್ಲ. ನಿಜಕ್ಕೂ ಮದರಂಗಿಗೆ 'ಮದ' ಇಲ್ಲ ಅನಿಸುತ್ತಾ ನಿಮಗೆ?! ಕಂಡಕಂಡವರೆಲ್ಲ ಬೆರಗಾಗೋ ಬಣ್ಣ ಕೊಡುವ ಈ 'ಮದರಂಗಿ' ಅನ್ನೋ ಪದ ಹುಟ್ಟಿದ್ದೇ ಅದರ 'ಮದ'ದ ಕಾರಣಕ್ಕೆ ಅನ್ನೋದು ನನ್ನ ಗಟ್ಟಿ ನಂಬಿಕೆ! :-)

    'ಅವಧಿ' ಯಲ್ಲಿ ಇದನ್ನು share ಮಾಡಿದ್ದಕ್ಕೆ 'ಅವಧಿ'ಗೆ ಧನ್ಯವಾದ.ತಿಳಿಸಿದ್ದಕ್ಕೆ ನಿಮಗೂ.

    ReplyDelete
  13. charitakka prabandhaa thumba channagi.
    -rajaneesh

    ReplyDelete